srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Group-B Hall Ticket:
✍🏻📋✍🏻📋✍🏻📋✍🏻📋

⚫ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲಿರುವ ವಿವಿಧ ಇಲಾಖೆಗಳಲ್ಲಿನ Group-B ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶಪತ್ರಗಳು ಇದೀಗ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard

⚫ ಆದರೆ ಮತ್ತೊಂದು ಎಡವಟ್ಟಾಗಿದೆ.!! ಒಂದೇ ದಿನ ನಡೆಯುವ GK ಪತ್ರಿಕೆಗೆ ಒಂದು ಊರಿನ Exam Center & ನಿರ್ಧಿಷ್ಟ ಪತ್ರಿಕೆಗೆ ಇನ್ನೊಂದು ಊರಿನಲ್ಲಿನ Exam Center ಕೊಟ್ಟಿರುವುದರಿಂದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ, ಪರೀಕ್ಷಾ ಕೇಂದ್ರದ ಹಂಚಿಕೆಯು ಅವೈಜ್ಞಾನಿಕವಾಗಿದೆ. ಇದು ತಾಂತ್ರಿಕ ದೋಷದಿಂದಾಗಿದ್ದರೆ ತಕ್ಷಣವೇ ಸರಿಪಡಿಸಲು ಮಾನ್ಯ KPSC ಗೆ ಈ ಮೂಲಕ SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Teacher's Day Special:
💐🍁💐🍁💐🍁💐🍁💐

ನನಗೆ ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ಹಣೆಮಣೆದು ನನ್ನ ಶಿರ ಸಾಷ್ಟಾಂಗ ಪ್ರಣಾಮಗಳೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದ ಸುಸಂದರ್ಭ.!!.!!
🙏🏻🙇🏻‍♂️🙏🏻🙇🏻‍♂️🙏🏻🙇🏻‍♂️🙏🏻🙇🏻‍♂️🙏🏻🙇🏻‍♂️

ವಿಜಯಪುರ ಜಿಲ್ಲೆಯ ಹಳ್ಳದ ಗೆಣ್ಣೂರ ಎಂಬ ಕುಗ್ರಾಮದಲ್ಲಿ ಕಂಗಾಲಾಗಿ ಕಾಡ್ಗಲ್ಲಿನಂತೆ ಬಿದ್ದಿದ್ದ ನನ್ನನ್ನು ತಿದ್ದಿ-ತೀಡಿ, ಶಿಲೆಯನ್ನು ಕೆತ್ತಿ, ಶಿಕ್ಷಕನನ್ನಾಗಿಸಲು & KAS ಅಧಿಕಾರಿಯನ್ನಾಗಿಸಲು ಹಗಲಿರುಳು ಶ್ರಮಿಸಿ, ಇಂದು ಲಕ್ಷಾಂತರ ಜನರಿಗೆ ಸ್ಪೂರ್ತಿಯ ಮೂರ್ತಿಯಾಗಿಸಿ, ಎಸ್ ಆರ್ ವಲ್ಡ್೯ ಮೂಲಕ ಲಕ್ಷಾಂತರ (4,60,000ಕ್ಕೂ ಅಧಿಕ) ಜನರ ಸೇವೆ ಮಾಡಲು ಅವಕಾಶ ಒದಗಿಬಂದಿರುವುದು ನನ್ನ ಪೂಜ್ಯಗುರುಗಳ ಆಶಿರ್ವಾದದ ಭಿಕ್ಷೆಯಿಂದ.!!
ಆ ಭಿಕ್ಷೆಯೇ ಇಂದು ನನಗೆ ಶ್ರೀರಕ್ಷೆ.!!
🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️

ಇಂತಿ 21 ವರ್ಷ ವಿದ್ಯಾರ್ಥಿಯಾಗಿ,
11 ವರ್ಷ ಶಿಕ್ಷಕನಾಗಿ ಹಾಗೂ
7 ವರ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸೇವಕ:
ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
🙏🏻💐🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
🌀 JOB!! NEWS: 🌀
💦💧💦💧💦💧💦💧

⚫ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿನ 21 ಗ್ರಂಥಾಲಯ ಮೇಲ್ವಿಚಾರಕರು (Library Supervisor) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: PUC, Certificate course in library Science.!!

⚫ ವಯೋಮಿತಿ: 18-35 (38 & 40) ವರ್ಷ.!!

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-09-2024.
👇🏻👇🏻👇🏻👇🏻👇🏻👇🏻👇🏻👇🏻👇🏻
https://chikkaballapur.nic.in/notice/zplib_sup2024rect-kn/

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdfನಲ್ಲಿರುವ ಅಧಿಸೂಚನೆ ನೋಡಬಹುದು.!!
💦💧💦💧💦💧💦💧💦💧💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Official Key Ans.:
✍🏻📃✍🏻📃✍🏻📃✍🏻📃✍🏻

⚫ 2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ (ಪತ್ರಿಕೆ-1ಕ್ಕೆ 3 Grace Marks ನೀಡುವುದರ ಮೂಲಕ) Official Key Answers ಗಳನ್ನು KEA ಇದೀಗ ಪ್ರಕಟಿಸಿದೆ.!!

⚫ ಆಕ್ಷೇಪಣೆಗಳಿದ್ದರೆ ಪ್ರತಿ ಆಕ್ಷೇಪಣೆಗೆ 50/- ತುಂಬಿ 2024 ಸೆಪ್ಟೆಂಬರ್-05 ರೊಳಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ.!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx

⚫ ಈ Question Papers ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32041
&
/channel/SRWORLDShankarBellubbiSir/32042
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Forest Watcher Order:
✍🏻📋✍🏻📋✍🏻📋✍🏻📋✍🏻

⚫ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯಲ್ಲಿ ಅಂತಿಮವಾಗಿ ಅರ್ಹರಾದ 267 ಅಭ್ಯರ್ಥಿಗಳಿಗೆ ಇಂದು Appointment Oder ನೀಡಲಾಗುತ್ತದೆ.!!

⚫ ಒಟ್ಟು ಹುದ್ದೆಗಳು : 402
ಅರ್ಜಿ ಸಲ್ಲಿಸಿದವರು : 1,94, 007
Final Select ಆದದ್ದು : 267
ಉಳಿದ ಹುದ್ದೆಗಳು : 43

⚫ ವಿಶೇಷವೆಂದರೆ ಕೆಲವು ಮೀಸಲಾತಿಯಡಿಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ಇರುವ ಕಾರಣ 43 ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಬ್ಯಾಕ್ ಲಾಗ್ ಆಗಿ ಉಳಿದವು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Bell Timings:
✍🏻🔥✍🏻🔥✍🏻🔥✍🏻🔥

⚫ 2024 ಸೆಪ್ಟೆಂಬರ್-22 ರಂದು ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!

⚫ ಒಟ್ಟು ಹುದ್ದೆಗಳು : 402
ಪರೀಕ್ಷೆ ಬರೆಯಲಿರುವವರು : 66,990
(1 ಹುದ್ದೆಗೆ 167 ಅಭ್ಯರ್ಥಿಗಳ ಫೈಟ್.!)

⚫ ಪರೀಕ್ಷಾ ಸಮಯ:
★ Paper-1: 50 Marks
10:30 am to 12:00 pm
ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆ.!

★ Paper-2: 150 Marks
12:30 pm ರಿಂದ 2:00 pm
(1.5 ಅಂಕದ 100 ಪ್ರಶ್ನೆಗಳು.)

(ಸೂಚನೆ: Negative Marking ಇರತ್ತೆ, ಪ್ರತಿ ತಪ್ಪು ಉತ್ತರಕ್ಕೆ 25% ಅಂಕ ಕಳೆಯಲಾಗುತ್ತದೆ.!!)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

KAS ಮರು ಪರೀಕ್ಷೆ ಬಗ್ಗೆ:
✍🏻📋✍🏻📋✍🏻📋✍🏻📋✍🏻

⚫ 2024 ಅಗಸ್ಟ್-27 ರಂದು ನಡೆದಿದ್ದ 384 KAS Prelims Exam ನ್ನು ರದ್ದುಗೊಳಿಸಿ, ಮುಂದಿನ 2 ತಿಂಗಳೊಳಗಾಗಿ KAS ಮರು ಪರೀಕ್ಷೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳು KPSC ಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ......

⚫ ಅರ್ಜಿ ಸಲ್ಲಿಸಿದ 2,10,910 ಅಭ್ಯರ್ಥಿಗಳೆಲ್ಲರಿಗೂ ಕೂಡಾ ಮತ್ತೊಂದು ಅವಕಾಶ ಸಿಗಲಿದೆ.!
(ಅಂದು 1,31,885 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.)

⚫ ಕಾರಣಾಂತರದಿಂದ ಅಂದು ಪರೀಕ್ಷೆಗೆ ಗೈರಾಗಿದ್ದ 79,025 ಅಭ್ಯರ್ಥಿಗಳಿಗೂ ಕೂಡಾ ಇದೀಗ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ಸಿಗತ್ತೆ.!!

⚫ ಶೀಘ್ರದಲ್ಲಿಯೇ KPSC ನೀಡುವ ಪತ್ರಿಕಾ ಪ್ರಕಟಣೆಯಲ್ಲಿ ಇದಕ್ಕೆ ಸೂಕ್ತ ಸ್ಪಷ್ಟೀಕರಣ ಸಿಗಲಿದೆ ನಿರೀಕ್ಷಿಸಿ..!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು ಬೃಹತ್ ಪ್ರತಿಭಟನೆ:
✍🏻📋✍🏻📋✍🏻📋✍🏻📋✍🏻

⚫ 2024 ಅಗಸ್ಟ್-27 ರಂದು ನಡೆದ KAS Prelims Exam ನಲ್ಲಿ ಗ್ರಾಮೀಣ ಭಾಗದ & ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಖಂಡಿಸಿ & ಮರು ಪರೀಕ್ಷೆಗೆ ಅಗ್ರಹಿಸಿ ಇಂದು (
02-09-2024 ರಂದು) ಬೃಹತ್ ಪ್ರತಿಭಟನೆ ನಡೆಯಲಿದ್ದು, ಕನ್ನಡಪರ ಹೋರಾಟಗಾರರು, ಸಂಘಟನೆಗಳು, ಪ್ರತಿನಿಧಿಗಳು & ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.!!

⚫ ಕನ್ನಡಿಗರಿಗೆ ಅನ್ಯಾಯವಾಗಲು ಬಿಡಲ್ಲ- ಈ ವಿಚಾರ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ, ಸಂಬಂಧಪಟ್ಟ ಸಚಿವರು ಕ್ರಮವಹಿಸುತ್ತಾರೆ, ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಮಾನ್ಯ ಶ್ರೀ DK ಶಿವಕುಮಾರ್ ಹೇಳಿದ್ದಾರೆ.!!
ಕೃಪೆ: ವಿಜಯವಾಣಿ & ಕನ್ನಡಪ್ರಭ
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಶಾಲಾ ಶಿಕ್ಷೆಯ ಮಹತ್ವ:
✍🏻📋✍🏻📋✍🏻📋✍🏻📋

ಶಿಕ್ಷಕರು ತಪ್ಪು ಮಾಡಿದ ಮಕ್ಕಳನ್ನು
ಹೊರಗ ಹಾಕತಾ ಇದ್ದ ಕಾಲದಲ್ಲಿ,
ಪೊಲೀಸರು ಒದ್ದ ಒಳಗ ಹಾಕೋದು ಕಡಿಮೆಯಾಗಿತ್ತು.!!

ಯಾವಾಗಿಂದ ಶಾಲೆಯಲ್ಲಿ
ಶಿಕ್ಷಕರು ನೀಡುವ ಏಟುಗಳು
ಕಡಿಮೆಯಾಗುತ್ತಾ ಬಂದವೋ, ಆವಾಗಿನಿಂದ ಪೊಲೀಸರ
ಲಾಠಿ ಏಟುಗಳು ಹೆಚ್ಚಾಗುತ್ತಾ ಬಂದವು.!!

ನೆನಪಿರಲಿ......
ಶಿಕ್ಷಣಕ್ಕಾಗಿ ಶಿಕ್ಷಕರು ನೀಡಿದ ಶಿಕ್ಷೆ,
ಅದು ಶಿಕ್ಷೆಯಲ್ಲ, ಮಕ್ಕಳಿಗೆ ಶ್ರೀರಕ್ಷೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC ಪ್ರಶ್ನೆಪತ್ರಿಕೆ-1:
✍🏻📃✍🏻📃✍🏻📃✍🏻

ಇದೀಗ ತಾನೆ (2024 ಸೆಪ್ಟೆಂಬರ್-01 ರಂದು) KEA ನಡೆಸಿದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1ರ Question Paper.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC Exam Today:
✍🏻📃✍🏻📃✍🏻📃✍🏻

⚫ ಇಂದು (2024 ಸೆಪ್ಟೆಂಬರ್-01 ರಂದು) ನಡೆಯಲಿದೆ BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆ:

⚫ ಒಟ್ಟು ಹುದ್ದೆಗಳು: 2,500
ಅರ್ಜಿ ಸಲ್ಲಿಸಿದವರು: 23,000
(1 ಹುದ್ದೆಗೆ ಕೇವಲ 9-10 ಅಭ್ಯರ್ಥಿಗಳ ಫೈಟ್.! ಇದುವರೆಗಿನ ನೇಮಕಾತಿ ಪರೀಕ್ಷೆಗಳಲ್ಲೇ ಅತೀ ಕಡಿಮೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ, ಅತೀ ಕಡಿಮೆ ಫೈಟ್ ಇರುವ ನೇಮಕಾತಿ ಪರೀಕ್ಷೆ ಎಂದರೆ ತಪ್ಪಾಗದು.!!)

⚫ ಪರೀಕ್ಷಾ ಸಮಯ:

Paper-1: 100 Marks
10:30 am to 12:30 pm

Paper-2: 100 Marks
2:30 pm ರಿಂದ 4:30 pm

(ಸೂಚನೆ: Negative Marking ಇದೆ, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಳೆಯಲಾಗುತ್ತದೆ)

ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ
Wish U all the Best from SR WORLD.
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAS Result & Cut-off:
✍🏻📋✍🏻📋✍🏻📋✍🏻📋

⚫ 2024 ಅಗಸ್ಟ್-27 ರಂದು ನಡೆದ KAS Prelims Exam Result ಯಾವಾಗ.?

⚫ ಕಟ್ ಆಫ್ ಅಂಕ 150-160 ಕ್ಕೆ ಇಳಿಕೆಯಾಗತ್ತಾ.? Mains ಗೆ ಅರ್ಹರಾಗಲು ಅಂಕ ಕಡಿತ.? ಗ್ರೇಸ್ ಅಂಕ ಸಾಧ್ಯತೆ.?

⚫ Prelims ನಲ್ಲಿ ನಿಮ್ಮ ಸ್ಕೋರ್ ಎಷ್ಟಾಗಿದ್ದರೆ ನೀವು ಈ ಕ್ಷಣದಿಂದಲೇ ಮುಖ್ಯ ಪರೀಕ್ಷೆಯ ತಯಾರಿ ಆರಂಭಿಸಬೇಕು.?

⚫ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಈ PDF ನಲ್ಲಿದೆ ಉತ್ತರ.!!
(ಕೃಪೆ: ಕನ್ನಡಪ್ರಭ & ವಿಜಯ ಕರ್ನಾಟಕ)

⚫ ಇವೆಲ್ಲಾ ವಿಚಾರದ ಬಗ್ಗೆ 2 ದಿನದ ಹಿಂದೆ SR WORLD ನಲ್ಲಿ ಮಾಹಿತಿ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32014
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

ಮನಸ್ಸು ಕಾ(ಪಾ)ಡುವ ಕನಸು ಕೆಎಎಸ್ಸು:
✍🏻📋✍🏻📋✍🏻📋✍🏻📋✍🏻📋✍🏻📋✍🏻

⚫ KAS Prelims Exam ನ್ನು ಬರೆದವರ ಗೊಂದಲವೆಂದರೆ, Mains ಗೆ Qualify ಆಗತೇವೋ ಇಲ್ಲೋ.? ಕಟ್ ಆಫ್ ಎಷ್ಟಕ್ಕೆ ನಿಲ್ಲತ್ತೆ ಏನೋ.? ಎಂಬ ಚಿಂತೆಯಲ್ಲಿ ಬೇರೆ ಪರೀಕ್ಷೆಗೂ ಓದೋಕೆ ಆಗದೇ Mains ಗೂ ತಯಾರಿ ಮಾಡೋಕೆ ಆಗದೇ ಗೊಂದಲದಲ್ಲಿದ್ದೀರಾ ಅಲ್ವಾ.? ಚಿಂತೆ ಬೇಡ SR WORLD ನಿಮ್ಮೊಂದಿಗಿದೆ.!!

⚫ KAS Prelims Result ಬರಲು ಇನ್ನೂ ಕನಿಷ್ಠ 1 ತಿಂಗಳು ಬೇಕು. ಆಮೇಲೆ ಅರ್ಹರಾದವರು Mains ಗೆ ಮತ್ತೊಮ್ಮೆ Application ಹಾಕಬೇಕಾಗತ್ತೆ ಅದಕ್ಕೆ 1 ತಿಂಗಳು Time ಕೊಡತಾರೆ, ಆಮೇಲೆ Mains Exam ನಡೆಯೋದು ಕನಿಷ್ಠ 3 ತಿಂಗಳ ನಂತರ. ಅಂದ್ರೆ ಒಟ್ಟಾರೆಯಾಗಿ ನೀವು KAS Mains ಬಗ್ಗೆ Zero Knowledge ಇದೆಯೆಂದರೂ ಕೂಡಾ ನಿಮಗೆ ಕನಿಷ್ಠ 5-6 ತಿಂಗಳು ಸಮಯ ಸಿಗತ್ತೆ, Zero ಇದ್ದವರೂ ಕೂಡಾ ಮನಸ್ಸು ಮಾಡಿದ್ರೆ Hero ಆಗಬಹುದು. ಅದಕ್ಕೊಂದು ಉದಾಹರಣೆ ಶಂಕರ್ ಜಿ ಬೆಳ್ಳುಬ್ಬಿ ಸರ್. ಅವರು ಕೂಡಾ Mains ಗೆ ಅರ್ಹರಾದಾಗ ಏನೂ ಗೊತ್ತಿರಲಿಲ್ವಂತೆ, ಆದ್ರೆ 4-5 ತಿಂಗಳಲ್ಲಿ ಒಂದು ಸೆಕೆಂಡ್ ಕೂಡಾ ಟೈಮ್ ವೇಸ್ಟ್ ಮಾಡದೇ, ಯಾವುದೇ ಟ್ವಿಸ್ಟ್ ಇಲ್ಲದೇ, ಏನೂ ರೆಸ್ಟ್ ಮಾಡದೇ, ದಿ ಬೆಸ್ಟ್ ಸ್ಟಡಿ ಮಾಡಿದ್ರು. ಕೆಎಎಸ್ ನ ಟೇಸ್ಟ್ ಮಾಡಿದ್ರು.!! ನೀವು ಕೂಡಾ ಮಾಡಿ.

⚫ ಹಾಗಾದರೆ ಹೀಗೆ ಮಾಡಿ, ನೀವು KAS ಹೊರತು ಪಡಿಸಿ ಬೇರೆ ಯಾವ Exam ಬರೆಯಬೇಕಾಗಿದೆಯೋ (ಉದಾ: IAS, PDO, PSI, PC, etc.) ಆ ಪರೀಕ್ಷೆ & KAS Mains ಎರಡಕ್ಕೂ Use ಆಗುವಂತಹ Common subject ಯಾವ್ಯಾವ ಇವೆ ಎಂಬುದನ್ನು list ಮಾಡಿ, ಸದ್ಯಕ್ಕೆ 1 ತಿಂಗಳು ಅವನ್ನೇ ಓದಿ, KAS RESULT ಬಂದಮೇಲೆ Select ಆದ್ರೆ KAS Mains ಓದಿ, ಆಗಿಲಿಲ್ಲ ಅಂದ್ರೆ ಉಳಿದ ಪರೀಕ್ಷೆಗೆ ತಯಾರಿ ಅದೇ Continue ಆಗಿರತ್ತೆ.!!

⚫ ಸದ್ಯದಲ್ಲೇ 2-3 ಪರೀಕ್ಷೆಗಳಿವೆ ಅವುಗಳ ತಯಾರಿ ಮಾಡಲೋ ಅಥವಾ KAS ಓದಲೋ ಅನ್ನೋ ಚಿಂತೆಯಲ್ಲೇ ಒಂದು ತಿಂಗಳು ಸಂತೆ ಮಾಡಬೇಡಿ, ಬೇಕಿದ್ರೆ ಒಂದು ಗಂಟೆ ಸಮಯ ತಗೊಳ್ಳಿ, ಒಬ್ರೆ ಏಕಾಂತದಲ್ಲಿ ಕೂತುಕೊಂಡು ಚಿಂತನೆ ಮಾಡಿ, ಒಂದು ಸಂಕಲ್ಪ ಮಾಡಿಕೊಂಡು ಅಧ್ಯಯನ ಆರಂಭಿಸಿ, ಯಾವುದೇ Negative Thoughts ಗೆ ನಿಮ್ಮ ಸಂಕಲ್ಪವನ್ನು ಬಲಿ ಕೊಡಬೇಡಿ.!!

⚫ ನೀವು ಇಲ್ಲಿ ಅದು ಹಂಗಾಗಬಾರದಿತ್ತು ಇದು ಹಿಂಗಾಗಬಾರದಿತ್ತು ಅಂತಾ ಬರೀ Discussion ಮಾಡೋದ್ರಲ್ಲೇ ಕಾಲ ಕಳೆದ್ರೆ, ಅಲ್ಲಿ Serious ಆಗಿ Study ಮಾಡೋರು ಮಾಡ್ತಾ ಇರ್ತಾರೆ, ನೀವು ನಿಮ್ಮ ಕೈಯಿಂದ ಸುಧಾರಿಸಲು ಆಗದೇ ಇರೋ ವಿಚಾರಗಳ ಬಗ್ಗೆ ದಿನವಿಡೀ ಚರ್ಚೆ ಮಾಡ್ತಾ ಕೂಡೋ ಬದಲು, ನಿಮ್ಮ ಕೈಯಲ್ಲಿರುವ Studyಯನ್ನೇ ಪ್ರಾಮಾಣಿಕವಾಗಿ ಮಾಡಿ ಪರೀಕ್ಷೆ ಪಾಸು ಮಾಡಿದ್ರೆ, ಆಗ ಯಾವುದು ನಿಮ್ಮಿಂದ ಬದಲಾಯಿಸಲು ಆಗಿರಲಿಲ್ಲವೋ ಅವೆಲ್ಲವುಗಳನ್ನು ನೀವು ಬದಲಾಯಿಸಬಲ್ಲ ಶಕ್ತಿಯನ್ನು ಪಡೆಯುತ್ತೀರಿ.!!

⚫ ಉದಾ: KPSC ಅಕ್ರಮಗಳ ಬಗ್ಗೆ ವರ್ಷಗಟ್ಟಲೆ ಚರ್ಚೆ ಮಾಡುವ ಬದಲು Serious ಆಗಿ 6 ತಿಂಗಳು ಓದಿ IAS ಆಫೀಸರ್ ಆಗಿ ಅದೇ KPSCಗೆ ಅಧ್ಯಕ್ಷನೋ Secretaryಯೋ ಆಗಿ ಬನ್ನಿ, ಆಗ ನಿಮಗೆ ಹೇಗೆ ಬದಲಾಯಿಸಬೇಕೋ ಹಾಗೆ ಬದಲಾಯಿಸುವಿರಂತೆ,

ಅದು ಬಿಟ್ಟು, ತಲೆ ಕೆಟ್ಟು, ಬರೀ ಸಿಟ್ಟು ಮಾಡಕೊಂಡ್ರೆ ಕೊನೆಗೆ ತಿನ್ನೋಕು ಇರಲ್ಲ ಹೊಟ್ಟೆಗೆ ಹಿಟ್ಟು. ಬಿಡಿ ಮೊಂಡು ಜುಟ್ಟು, ಹಿಡಿ ಪುಸ್ತಕದ ಕಟ್ಟು, ಇರಲಿ ಒಗ್ಗಟ್ಟು ಇದೇ ನಿಮ್ಮ ಜೀವನದ ಯಶಸ್ಸಿನ ಗುಟ್ಟು, ಆಗದಿರಲಿ ಇದು ರಟ್ಟು.!!

"ನೆನಪಿರಲಿ, ಕೋಪ ಅನ್ನೋ ಕಾಯಿಲೆಗೆ ಮೊದಲನೇ ಬಲಿನೇ ಕೋಪ ಮಾಡಿಕೊಂಡವರು.!!"

ಹಾಗಾದರೆ ಈಗ ಏನು ಮಾಡುತ್ತೀರಿ.? ಹಾಳು ಹರಟೆನೋ.? ಅಥವಾ Study.ನೋ?.!!

ಗಟ್ಟಿಯಾಗಬೇಕು ನೀ ನಿಲ್ಲೋವರೆಗೂ
ಗಟ್ಟಿಯಾಗಿ ನಿಲ್ಲಬೇಕು ನೀ ಗೆಲ್ಲೋವರೆಗೂ.!!

ಕಾಡುವ ಕನಸನ್ನು
ಕಾಡಿಗೆ ಕಳಿಸದೇ,
ಕಾಪಾಡುವ ಹುಮ್ಮಸ್ಸಿನ ಮನಸ್ಸು ನಿಮ್ಮದಾಗಲಿ.!!

ವಿಶ್ U ಆಲ್ ದಿ ಬೆಸ್ಟ್.
ಇಂತಿ ನಿಮ್ಮ SR WORLD.
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

COMING SOON:
🔜🔜🔜🔜🔜🔜

ಕರ್ನಾಟಕ ಸರಕಾರವು ಸುಮಾರು 3,000 ಕ್ಕೂ ಅಧಿಕ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಹೊರಡಿಸಿದ ನೇಮಕಾತಿ ಅಧಿಸೂಚನೆಯೊಂದು ಇದೀಗ SR WORLD ನಲ್ಲಿ Update ಆಗಲಿದೆ. ನಿರೀಕ್ಷಿಸಿ ಅತಿ ಶೀಘ್ರದಲ್ಲಿ...!!
🔜🔜🔜🔜🔜🔜🔜🔜🔜

Читать полностью…

SR W🌍RLD

ವಿಷವಾದ ವಿಷಾಧನೀಯ ವಿಷಯ:
✍🏻📋✍🏻📋✍🏻📋✍🏻📋✍🏻📋✍🏻📋

⚫ KPSC ಯ ಲೋಪ, ಅಭ್ಯರ್ಥಿಗಳ ಕೋಪ, ಪ್ರತಿಭಾವಂತರು ಏನ್ ಮಾಡಿದ್ದಾರೋ ಪಾಪ.!!

⚫ ಇದು ಯಾವುದೋ ಸಣ್ಣಪುಟ್ಟ LKG / UKG ಮಕ್ಕಳಿಗೆ ನಡೆಸಿದ ಪರೀಕ್ಷೆಯಲ್ಲ.! ಇಡೀ ರಾಜ್ಯದ ಬೊಕ್ಕಸವನ್ನು ರಕ್ಷಿಸಬಲ್ಲ, ಆಡಳಿತದ ದಿಕ್ಕನ್ನು ನಿರ್ಧರಿಸಬಲ್ಲ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆ.!! ಹೌದು ಇತ್ತೀಚೆಗೆ KPSC ನಡೆಸಿದ KAS ಪರೀಕ್ಷೆಯಲ್ಲಿ ಪ್ರತಿಭಾವಂತರಿಗಾದ ಪ್ರಮಾದದ ಪ್ರಮಾಣವಿದು.!!

⚫ ನಮ್ಮ ರಾಜ್ಯ ಹೊರತುಪಡಿಸಿ ಬೇರೆ ಯಾರೋ Question Paper ಸಿದ್ದಪಡಿಸಿದಾಗ English ನಿಂದ ಕನ್ನಡಕ್ಕೆ ಅನುವಾದ ಮಾಡಿ, ದೋಷಗಳಾಗಿದ್ದರೆ English ನಲ್ಲಿರುವುದೇ ಅಂತಿಮವೆಂದು ಹೇಳುವುದು ವಾಡಿಕೆ, ಆದರೆ ನಮ್ಮ ಕರ್ನಾಟಕದವರೇ ನಡೆಸುವ ಪರೀಕ್ಷೆಯಲ್ಲಿಯೂ ಹೀಗೇ ಹೇಳಿದರೆ ಕನ್ನಡವನ್ನು ಉಳಿಸುವವರಾರು.? ಕನ್ನಡದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ, English ಗೆ ಅನುವಾದ ಮಾಡಿ, ದೋಷಗಳಾಗಿದ್ದರೆ ಕನ್ನಡದಲ್ಲಿರುವುದೇ ಅಂತಿಮವೆಂದು ಹೇಳಬೇಕು. ಯಾಕೆ ಇವರಿಗೆಲ್ಲಾ ಕನ್ನಡಾನೇ ಬರಲ್ವಾ.? ಇನ್ಮೇಲಾದರೂ ಈ ಬಗ್ಗೆ ಚಿಂತನೆಯಾಗಲಿ.!!

⚫ ಎಡವಿದ ಕಲ್ಲಿಗೇ ಪದೇ ಪದೇ ಎಡವುತ್ತಿದ್ದೇವೆಂದರೆ, ಒಂದು ನಾವು ನಿಜವಾಗಿಯೂ ಕುರುಡರಾಗಿರಬೇಕು, ಇಲ್ಲಾ ಕುರುಡುತನದ ನಾಟಕವಾಡುತ್ತಿರಬೇಕೆಂದೆನಿಸುತ್ತಿದೆ.!!

⚫ ಪ್ರತಿಭಾವಂತರನ್ನು ಆಯ್ಕೆಮಾಡಬೇಕಾದ ಪ್ರತಿಯೊಂದು ಪರೀಕ್ಷೆಯೂ ಕೂಡಾ ಪ್ರತಿ ಬಾರಿಯೂ ಹೀಗೇ ಆದರೆ ಪ್ರತಿಭೆಗಳ ಪ್ರಭೆ, ಹಬೆ/ಹಗೆಯಾಗಿ ಹೋಗುವುದು.!!
ಇನ್ನೂ ನಾವು ಸಂಘಟನೆಯಾಗದಿದ್ದರೆ ಇಂತಹ ಘಟನೆಗಳು ಫಟಿಸುತ್ತಲೇ ಇರುತ್ತವೆ.! ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇದರ ಗಂಭೀರ ಪರಿಣಾಮದ ಬೆಲೆಯನ್ನು ಮುಂದಿನ ಪೀಳಿಗೆ ತೆರಬೇಕಾಗುತ್ತದೆ.!!
ಬದಲಾಗೋಣ ಬದಲಾಯಿಸೋಣ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Revised Ans.:
✍🏻📃✍🏻📃✍🏻📃✍🏻📃✍🏻

11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (ಉಳಿಕೆ ಮೂಲ ವೃಂದದ) Assistant Controller (SAAD) Prelims Exam ಗೆ ಸಂಬಂಧಿಸಿದಂತೆ Revised Key Answers ಇದೀಗ ಪ್ರಕಟಗೊಂಡಿವೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
230 CTI RESULT SOON:
✍🏻📋✍🏻📋✍🏻📋✍🏻📋✍🏻

⚫ 21-01-2024 ರಂದು ನಡೆದ 230 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ (1:3 List ) ಪ್ರಕಟಿಸಲು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು ( 2024 ಸೆಪ್ಟೆಂಬರ್-04 ರಂದು) ಸಲ್ಲಿಕೆಯಾಗಿದೆ, ಯಾವುದೇ ಕ್ಷಣದಲ್ಲಾದರೂ ಪ್ರಕಟಗೊಳ್ಳಬಹುದು ನಿರೀಕ್ಷಿಸಿ.!!

⚫ ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ 54 ವೈದ್ಯಾಧಿಕಾರಿ (ಆಯುರ್ವೇದ) ಹುದ್ದೆಗಳ ಹೆಚ್ಚುವರಿ ಪಟ್ಟಿ.!!

⚫ ರೇಷ್ಮೆ ಇಲಾಖೆಯಲ್ಲಿನ Sericulture Extension Officer 60 ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಕೂಡಾ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴

GOD IS NO WHERE.!
GOD IS NOW HERE.!

ದೇವರು ಎಲ್ಲಿಯೂ ಇಲ್ಲ.!
ದೇವರು ಈಗ ಇಲ್ಲೇ ಇದ್ದಾನೆ.!!

ಇಲ್ಲಿ ಒಂದೇ ಒಂದು ಅಕ್ಷರವೂ ಕೂಡಾ ಬದಲಾಗಿಲ್ಲ, ಆದರೆ ಅರ್ಥ ಮಾತ್ರ ಬದಲಾಗಿದೆ.!! ಹೇಗೆ ಸಾಧ್ಯ.?

ಅಕ್ಷರಗಳ ಮದ್ಯದ ಸ್ಥಳ ಬದಲಾಗಿದ್ದರಿಂದ
ಇಡೀ ವಾಕ್ಯದ ಅರ್ಥವೇ ತದ್ವಿರುದ್ಧವಾಗಿದೆ.!!
Negative Approach ಇದ್ದದ್ದು Positive Approach ಆಗಿದೆ.!!

ನಿಮ್ಮ ಜೀವನವೂ ಹಾಗೆ.
ನೀವು ಎಷ್ಟೇ ಸರಿಯಾಗಿದ್ದರೂ ನೀವು ಯಾರೊಂದಿಗೆ ಸ್ನೇಹ ಮಾಡುವಿರಿ ಅವರು & ನೀವಿರುವ ಸ್ಥಳ/ಪರಿಸರ ಸರಿಯಾಗಿಲ್ಲವೆಂದರೆ ನಿಮಗೆ Negative Result ಸಿಗುತ್ತಾ, ನಿಮ್ಮ ಜೀವನದ ಅರ್ಥವೇ ಅನರ್ಥ/ ವ್ಯರ್ಥವಾಗಬಲ್ಲದು.!!

ಆದ್ದರಿಂದ ಯಾವಾಗ, ಯಾರೊಂದಿಗೆ, ಯಾವ ಸ್ಥಳದೊಂದಿಗೆ & ಹೇಗೆ ಇರಬೇಕು ಎಂಬುದನ್ನು ನಿರ್ಧರಿಸುವ ನಿಮ್ಮ ನಿರ್ಧಾರ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.!!

ಧನಾತ್ಮಕ ಮನೋಭಾವನೆ ತರಲಿದೆ
ನಿಮಗೆ ಧನದ ಸಂಭಾವನೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Official Key Ans.:
✍🏻📃✍🏻📃✍🏻📃✍🏻📃✍🏻

2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ Official Key Answers ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
BMTC: DV Call Letter:
✍🏻📃✍🏻📃✍🏻📃✍🏻📃

⚫ 2024 ಜುಲೈ-14 ರಂದು ನಡೆದಿದ್ದ HK ಭಾಗದ BMTC Conductor ನೇಮಕಾತಿ ಪರೀಕ್ಷೆಯಲ್ಲಿ 1:5 ನಂತೆ Physical &  Document Verification ಗೆ ಅರ್ಹರಾದ ಅಭ್ಯರ್ಥಿಗಳಿಗೆ ಇದೀಗ ಈ ಕೆಳಗಿನ ಲಿಂಕ್ ನಲ್ಲಿ Call Letter ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
http://mahithikanaja.mybmtc.com:8085/recruitment/callletter.php

⚫ Merit List & ಕಟ್ ಆಫ್ ಅಂಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31987
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PSI & VAO Exam Update:
✍🏻📋✍🏻📋✍🏻📋✍🏻📋✍🏻

2024 ಸೆಪ್ಟೆಂಬರ್-22 & 29 ರಂದು ನಡೆಸಲು ಉದ್ದೇಶಿಸಲಾಗಿರುವ ಕ್ರಮವಾಗಿ 402 Civil PSI & 1000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ Dress Code ಹೇಗಿರಬೇಕು.? ಎಂಬುದರ ಕುರಿತು KEA ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS ಮರು ಪರೀಕ್ಷೆಗೆ ಸೂಚನೆ:
✍🏻📋✍🏻📋✍🏻📋✍🏻📋✍🏻

2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಗ್ರಾಮೀಣ ಭಾಗದ & ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯದ ಹಿನ್ನೆಲೆಯಲ್ಲಿ ಮುಂದಿನ 2 ತಿಂಗಳೊಳಗಾಗಿ ಮರು ಪರೀಕ್ಷೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳು ಇದೀಗ KPSC ಗೆ ಸೂಚನೆ ನೀಡಿದ್ದಾರೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Exam Updates:
✍🏻📃✍🏻📃✍🏻📃✍🏻📃✍🏻

⚫ ನಿನ್ನೆ (2024 ಸೆಪ್ಟೆಂಬರ್-01 ರಂದು) ನಡೆದೆ BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆ:

ಒಟ್ಟು ಹುದ್ದೆಗಳು : 2,500
ಅರ್ಜಿ ಸಲ್ಲಿಸಿದವರು : 23,023
ಪರೀಕ್ಷೆ ಬರೆದವರು : 18,879
(1 ಹುದ್ದೆಗೆ ಕೇವಲ 7-8 ಅಭ್ಯರ್ಥಿಗಳ ಫೈಟ್.!)

⚫ ಇದುವರೆಗಿನ ನೇಮಕಾತಿ ಪರೀಕ್ಷೆಗಳಲ್ಲೇ ಅತೀ ಕಡಿಮೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ & ಅತೀ ಕಡಿಮೆ ಫೈಟ್ ಇರುವ ನೇಮಕಾತಿ ಪರೀಕ್ಷೆ ಇದಾಗಿದ್ದು ಅತೀ ಶೀಘ್ರದಲ್ಲಿಯೇ ಕೀ ಉತ್ತರಗಳನ್ನು & ಫಲಿತಾಂಶವನ್ನೂ ಪ್ರಕಟಿಸುವ ಸಾದ್ಯತೆ.!!

⚫ Question Paper -1 & 2 ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32041
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32042
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
BMTC ಪ್ರಶ್ನೆಪತ್ರಿಕೆ-2:
✍🏻📃✍🏻📃✍🏻📃✍🏻

⚫ ಇದೀಗ ತಾನೆ (2024 ಸೆಪ್ಟೆಂಬರ್-01 ರಂದು) KEA ನಡೆಸಿದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-2ರ Question Paper.!!

⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Kannada   : 35
★ English      : 35
★ Computer  : 30
===============
★ TOTAL        : 100
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻

Telegram App ನ ಸ್ಥಾಪಕ "ಪಾವೆಲ್ ಡುರೋವ್" ರವರನ್ನು ಬಂಧಿಸಲಾಗಿದ್ದು, ಟೆಲಿಗ್ರಾಂ ಮೇಲೆ ತನಿಖೆ ನಡೆಯುತ್ತಿದೆ.!

ಯಾವುದೇ ಕ್ಷಣದಲ್ಲಾದರೂ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆಗುವ ಸಾದ್ಯತೆ ಇದ್ದು, ಒಂದು ವೇಳೆ ಬ್ಯಾನ್ ಆದ್ರೆ SR WORLD ಟೆಲಿಗ್ರಾಂ ಚಾನೆಲ್ ಮೂಲಕ 4.61 ಲಕ್ಷ ಜನರಿಗೆ ನೀಡುತ್ತಿದ್ದ ಈ ಉಚಿತ ಸೇವೆಯನ್ನು "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, ಈಗಾಗಲೇ SR WORLD ನ ಹೊಸ ವಾಟ್ಸಾಪ್ ಚಾನೆಲ್ ಗೆ 60,000 ಕ್ಕೂ ಅಧಿಕ ಜನ Join ಆಗಿದ್ದಾರೆ.!!

ಆದ್ದರಿಂದ ಈ ಕೂಡಲೇ SR WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ)  WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻
KAS ಹೋರಾಟ:
✍🏻📋✍🏻📋✍🏻📋

⚫ 2024 ಅಗಸ್ಟ್-27 ರಂದು ನಡೆದ KAS Prelims Exam ನಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆದ ಅನ್ಯಾಯಕ್ಕೆ ಸಂಬಂಧಿಸಿದಂತೆ KPSC ವಿರುದ್ಧ ಕನ್ನಡಿಗರ ಕಿಡಿ, ಅಭ್ಯರ್ಥಿಗಳ X-ಅಭಿಯಾನ, ABVP & ಕರವೇ ಬೆಂಬಲ.!!

⚫ ಬಡ ಕನ್ನಡ ಮಕ್ಕಳ ಕನಸು ಜಜ್ಜಿ ಹಾಕಬೇಡಿ.! ನ್ಯಾಯಕ್ಕಾಗಿ ಹೋರಾಟ.!!

⚫ ಉತ್ತರದಾಯಿತ್ವ ವಿಲ್ಲದ KPSC ಗೆ ಬೇಕಿದೆ ಅಮೂಲಾಗ್ರ ಬದಲಾವಣೆ.!!

⚫ KPSC ಸುಧಾರಣೆಗೆ ಸಂಬಂಧಿಸಿದಂತೆ ಆಡಳಿತ ಸುಧಾರಣಾ ಅಯೋಗವು ಇತ್ತೀಚೆಗೆ ನೀಡಿದ ವರದಿಯಲ್ಲಿರುವ ಅಂಶಗಳಾವವು.? ಇಲ್ಲಿದೆ ಸಂಪೂರ್ಣ ಮಾಹಿತಿ.!!
ಕೃಪೆ: ಕನ್ನಡಪ್ರಭ & ಪ್ರಜಾ (ವಿಜಯ) ವಾಣಿ
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AE Final Score List:
✍🏻📃✍🏻📃✍🏻📃✍🏻📃

11-08-2024 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು & ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಅಂಕಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Govt. JOB.!! NEWS:
✍🏻🍁✍🏻🍁✍🏻🍁✍🏻

⚫ ಕರ್ನಾಟಕ ಸರ್ಕಾರದ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಸುಮಾರು 3,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ QUALIFICATION:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

⚫ ಎಷ್ಟು ಹುದ್ದೆಗಳಿವೆ ಗೊತ್ತಾ.?
ಧಾರವಾಡ : 199
ಶಿವಮೊಗ್ಗ : 575
ಗದಗ : 196
ವಿಜಯನಗರ : 297
ಯಾದಗಿರಿ : 470
ದಾವಣಗೆರೆ : 237
ಬಳ್ಳಾರಿ : 141
ಹಾಸನ : 734
ಚಿತ್ರದುರ್ಗ : 215

⚫ ಅರ್ಜಿ ಸಲ್ಲಿಸಲು ಪ್ರತಿ ಜಿಲ್ಲೆಗೂ ಬೇರೆ ಬೇರೆ ಕೊನೆಯ ದಿನಾಂಕವಿದೆ.!! ಚಿತ್ರದುರ್ಗ ಜಿಲ್ಲೆಗೆ ಅರ್ಜಿ ಸಲ್ಲಿಸಲು ಇಂದೇ (
31-08-2024) ಕೊನೆಯ ದಿನ.!!

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/
🌻🍁🌻🍁🌻🍁🌻🍁🌻🍁🌻
🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Exam Update:
✍🏻🔥✍🏻🔥✍🏻🔥✍🏻🔥

⚫ ವಿಶೇಷ ಸೂಚನೆ: ಇದು ಯಾರ ಮನಸ್ಸನ್ನು ಮೆಚ್ಚಿಸಲಿಕ್ಕೂ ಅಲ್ಲ & ಚುಚ್ಚಿಸಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!

⚫ 2024 ಸೆಪ್ಟೆಂಬರ್-22 ರಂದು ನಡೆಸಲು ಉದ್ದೇಶಿಸಲಾಗಿರುವ 402 Civil PSI ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆ.!!
✍🏻🔥✍🏻🔥✍🏻🔥✍🏻🔥✍🏻🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SDA Addl. Select List:
✍🏻📋✍🏻📋✍🏻📋✍🏻📋✍🏻

⚫ 2017 ನೇ ಸಾಲಿನ SDA ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯು (2nd Additional Select List ) ಕಟ್ ಆಫ್ ಅಂಕಗಳೊಂದಿಗೆ KPSC ಯಿಂದ ಇದೀಗ ಪ್ರಕಟಗೊಂಡಿದೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 8 ದಿನದ ಹಿಂದೆಯೇ (ಅಗಸ್ಟ್-22 ರಂದೇ) ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31948
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel