ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KAS Age Relaxation: ★
✍🏻📋✍🏻📋✍🏻📋✍🏻📋✍🏻📋
⚫ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ 3 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆ ಮಾಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ.!!
⚫ ಈ ವರ್ಷ ಹೊರಡಿಸುವ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಮಾತ್ರ ಒಂದು ಬಾರಿ ಇದು ಅನ್ವಯ.!!
⚫ ಗರಿಷ್ಠ ವಯೋಮಿತಿ ಹೆಚ್ಚಳ:
GM = 35 ರಿಂದ 38ಕ್ಕೆ
2A, 2B, 3A & 3B = 38 ರಿಂದ 41
C-1/SC/ST = 40 ರಿಂದ 43 ಕ್ಕೆ
⚫ ವಯೋಮಿತಿ ಹೆಚ್ಚಳ ಮಾಡಲಿರುವ ಮಾಹಿತಿಯನ್ನು 21-10-2023 ರಂದೇ SR WORLD ನಲ್ಲಿ ಹಂಚಿಕೊಳ್ಳಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28662
🌀💦🌀💦🌀💦🌀💦🌀💦🌀
............ಮುಂದುವರೆದ ಭಾಗ:
ನಾವು ದೀರ್ಘಕಾಲೀನ ಗುರಿಗಳನ್ನು ಇಟ್ಟುಕೊಂಡಾಗ ಶಿಸ್ತು ಅತಿಮುಖ್ಯ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಲು, ಲಕ್ಷ ಲಕ್ಷ ಮಂದಿ ತೊಡಗಿಸಿಕೊಳ್ಳುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಪಡೆದು ಕೆಲಸ ಗಿಟ್ಟಿಸಿಕೊಳ್ಳಲು, ವ್ಯವಹಾರದಲ್ಲಿ ಅಭಿವೃದ್ಧಿ ಸಾಧಿಸಲು ಎಲ್ಲದಕ್ಕೂ ದಿನವೂ ಪ್ರಯತ್ನ ಪಡಬೇಕು. ಪ್ರತಿದಿನ ನಾವು ಮಾಡುವ ಅತಿಚಿಕ್ಕ ಕೆಲಸಗಳೇ ನಮ್ಮನ್ನು ಯಶಸ್ವಿಯಾಗಿಸುತ್ತವೆ. ಯಾವುದಾದರೂ ದೊಡ್ಡ ಸಾಧನೆಯ ಹಿಂದೆ ವರ್ಷವರ್ಷಗಳ ಹಲವು ತಿಂಗಳುಗಳ ಕಠಿಣ ಶ್ರಮ ಇರುತ್ತದೆ. ರೋಮ್ ಅಷ್ಟೇ ಅಲ್ಲ ಯಾವ ಸಾಮ್ರಾಜ್ಯವನ್ನೂ ಒಂದು ದಿನದಲ್ಲಿ ಕಟ್ಟಲಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಬಹಳ ಜನರು ಇವೆಲ್ಲವನ್ನೂ ತಿಳಿದುಕೊಂಡು ಕೆಲಸ ಆರಂಭಿಸುತ್ತಾರೆ. ಈ ಸಲ KAS/PSI/FDA/SDA ಹುದ್ದೆಗೆ ಅರ್ಜಿ ಹಾಕಿದ್ದೇನೆ, ನಾಳೆಯಿಂದ ದಿನಕ್ಕೆ ಹತ್ತು ಗಂಟೆ ಓದುತ್ತೇನೆ. ಸರಿ, ಡೈರಿಯಲ್ಲಿ ಬರೆದಾಯಿತು, ಟೈಂ ಟೇಬಲ್ ಮಾಡಾಯಿತು. ವಿವೇಕಾನಂದರ, ಸ್ಟೀವ್ ಜಾಬ್ಸ್ ಅವರ ನುಡಿಗಳನ್ನು ಕನ್ನಡಿಗೆ ಅಂಟಿಸಿಕೊಂಡಾಯಿತು. ಮಾರನೇ ದಿನ ಹತ್ತು ಗಂಟೆ ಓದಿಯೂ ಆಯಿತು. ಅದರ ಮಾರನೇ ದಿನ ಹತ್ತು ಗಂಟೆ ಆರು ಗಂಟೆಯಾಗಿ, ಮುಂದಿನ ದಿನ ಆರು ಗಂಟೆ ಎರಡು ಗಂಟೆಯಾಗಿ ಮುಂದಿನ ಎರಡು ದಿನಗಳಲ್ಲಿ ಹತ್ತು ನಿಮಿಷವೂ ಪುಸ್ತಕ ಮುಟ್ಟಲೂ ಬೇಜಾರಾಗಿ ‘ಥತ್, PSI/KAS ಆಗೋದು ಮಾತ್ರ ಉದ್ಯೋಗವಾ? ಬದುಕೋಕೆ ನೂರು ದಾರಿ ಇದೆ’ ಎಂದು ಪರೀಕ್ಷೆ ಬರೆವ ವಿಚಾರವನ್ನೇ ಕೈಬಿಟ್ಟೂ ಆಯಿತು. ಇದೊಂದೇ ಪರೀಕ್ಷೆಯಲ್ಲ, ಶಿಕ್ಷಕರ ಉಪನ್ಯಾಸಕರ ಹುದ್ದೆಗಾಗಿನ ಅರ್ಹತಾ ಪರೀಕ್ಷೆ, ವೈದ್ಯಕೀಯ ಪ್ರವೇಶ ಪರೀಕ್ಷೆ, ರಾಷ್ಟ್ರಮಟ್ಟದ ಇನ್ನಿತರ ಪರೀಕ್ಷೆಗಳು ಮುಂತಾದವನ್ನು ಬರೆವ ನೂರಕ್ಕೆ ತೊಂಭತ್ತು ಮಂದಿಯ ಅವಸ್ಥೆ ಇದೇ. ಪ್ರತಿವರ್ಷ ಐಎಎಸ್ ಹುದ್ದೆಯಿಂದ ಹಿಡಿದು ಎರಡನೇ ದರ್ಜೆಯ ಗುಮಾಸ್ತರ ಹುದ್ದೆಯವರೆಗೂ ನೂರಾರು ಪರೀಕ್ಷೆಗಳು ನಡೆಯುತ್ತವೆ. ಒಂದೊಂದು ಪರೀಕ್ಷೆಗೆ ಬರುವ ಅರ್ಜಿಗಳೋ ಈಗ ಸಾವಿರ ದಾಟಿ ಲಕ್ಷವಾಗಿವೆ. ಆದರೆ ಶಿಸ್ತಿನಿಂದ ಓದುವವರು ಎಷ್ಟು ಜನ ಎಂದರೆ ಬೆರಳೆಣಿಕೆಯಷ್ಟು. ಹಾಗಾಗಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಮಾತು. ಹುದ್ದೆಗಳೆಲ್ಲ ಬುದ್ಧಿವಂತರಿಗೇ ಸಿಗುವುದು ಎಂದು ಯಾರೂ ನಿರಾಶರಾಗುವ ಅಗತ್ಯವಿಲ್ಲ. ಪ್ರಯತ್ನಪಡದ ಜಾಣನಿಗಿಂತ ಸತತ ಪ್ರಯತ್ನ ಪಡುವ ಸಾಧಾರಣ ಬುದ್ಧಿಮತ್ತೆಯವನು ಯಶಸ್ಸು ಗಳಿಸುತ್ತಾನೆ.!!
ಯಾವುದಾದರೂ ಕೋಚಿಂಗ್ ಕೇಂದ್ರದಿಂದಲೋ, ಯೂ ಟ್ಯೂಬ್ನಿಂದಲೋ ಅಥವಾ ಈ ಬಗ್ಗೆ ಮಾಹಿತಿ ಇದ್ದವರಿಂದ ಸಲಹೆ ಪಡೆದು, ಸಿಲಬಸ್ನಲ್ಲಿ ಏನಿದೆ ಎಂದು ನೋಡಿ, ವಿಷಯವಸ್ತು ಸಂಗ್ರಹಿಸಿ ದಿನಕ್ಕಿಷ್ಟು ಓದಿ ಮುಗಿಸಿ ಅದನ್ನೇ ನಿರಂತರವಾಗಿ ಮಾಡಿನೋಡಿ! ನಿಮಗಲ್ಲದೆ ಇನ್ಯಾರಿಗೆ ಯಶಸ್ಸು ಸಿಕ್ಕೀತು? ಇದು ಎಲ್ಲ ಕ್ಷೇತ್ರದವರಿಗೂ ಅನ್ವಯಿಸುತ್ತದೆ. ಪ್ರಯತ್ನವಿಲ್ಲದ ಬುದ್ಧಿವಂತಿಕೆ ಯಾವ ಪ್ರಯೋಜನಕ್ಕೂ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಇನ್ನಾದರೂ ಎದ್ದು ಮುಂದೆ ಹೆಜ್ಜೆಗಳನ್ನಿಡೋಣ. ಏನಂತೀರಿ?
ಇದು ನಿಮಗೆ ಇಷ್ಟವಾಗಿದ್ದರೆ & ನಿಮ್ಮೊಳಗಿನ ಮಲಗಿದ್ದ ವ್ಯಕ್ತಿಯನ್ನು ಬಡಿದೆಬ್ಬಿಸಿದ್ದರೆ ನಮ್ಮ ವಾಟ್ಸಾಪ್ ನಂಬರ್ ಗೆ ಪ್ರತಿಕ್ರಿಯೆ ನೀಡಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️
ಪೆಬ್ರವರಿ-2023:
ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI : PRESS NOTE: ★
✍🏻📃✍🏻📃✍🏻📃✍🏻📃✍🏻
2024 ಜನವರಿ 6 & 7 ರಂದು ನಡೆಯಲಿರುವ 15 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಾದ ಕೆಲವು ತೊಂದರೆಗಳಿಗೆ KPSC ಇದೀಗ ಸ್ಪಷ್ಟೀಕರಣ ನೀಡುವ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SBI: Interview Date: ★
✍🏻📃✍🏻📃✍🏻📃✍🏻📃✍🏻📃
ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ Specialist Cadre Officers (Bank SO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ Interview Schedule ನ್ನು ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL: JE Final List: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ JE (Civil) ಮಿಕ್ಕುಳಿದ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
★ K-SET: PH LIST: ★
✍🏻📃✍🏻📃✍🏻📃✍🏻📃
2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯಲಿರುವ ಅಂಗವಿಕಲ(PH) ಅಭ್ಯರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Hall Ticket Problem.?: ★
✍🏻📃✍🏻📃✍🏻📃✍🏻📃✍🏻📃
2024 ಜನವರಿ 6 & 7 ರಂದು ನಡೆಯಲಿರುವ 15 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರವನ್ನು KPSC ಪ್ರಕಟಿಸಿದ್ದು, ಅದರಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆ ಮಾಡುವಲ್ಲಿ 2ದಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನೀಡಲಾಗಿದೆ & ಕೆಲವರಿಗೆ ಕಡ್ಡಾಯ ಕನ್ನಡ ನಮೂದೇ ಆಗಿಲ್ಲ.!! ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.!!
KPSC ಇದನ್ನು ಶೀಘ್ರದಲ್ಲಿಯೇ ಪರಿಹರಿಸಲು SR WORLD ಈ ಮೂಲಕ ವಿನಂತಿಸುತ್ತದೆ.!!
ಅಭ್ಯರ್ಥಿಗಳು ತಮ್ಮ ತೊಂದರೆಯನ್ನು ctipending@gmail.comಗೆ ಮೇಲ್ ಮಾಡಿ,
ಅಭ್ಯರ್ಥಿಗಳೇ ಭಯ ಬೇಡ,
ಭರವಸೆ ಇರಲಿ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ K-SET: Hall Ticket: ★
✍🏻📃✍🏻📃✍🏻📃✍🏻📃✍🏻
2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರವೇಶಪತ್ರ ಇದೀಗ ಪ್ರಕಟಗೊಂಡಿದೆ.!!
ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ Group-C Key Ans.: ★
✍🏻🍁✍🏻🍁✍🏻🍁✍🏻🍁✍🏻
★ 30-12-2023 ರಂದು KPSC ನಡೆಸಿದ HK ಭಾಗದ Co-operative Inspector ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ 1 & 2 ಕ್ಕೆ ಇದೀಗ Official Key Answers ಪ್ರಕಟಗೊಂಡಿವೆ.!!
★ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29437
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂYear ನ್ಯೂ ನೇಮಕಾತಿ:
✍🏻📃✍🏻📃✍🏻📃✍🏻📃✍🏻
⚫ 01-01-2024ಕ್ಕೆ ಅನ್ವಯಿಸುವಂತೆ KPSC ಯಿಂದ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲು ಸಿದ್ದಗೊಂಡಿರುವ ಹೊಸ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!
⚫ ಈ ನೇಮಕಾತಿಗಳಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.!!
✍🏻📋✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ SEO Eligibility List: ★
✍🏻📃✍🏻📃✍🏻📃✍🏻📃✍🏻
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) ಹುದ್ದೆಗಳ (NON HK) ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ WARDEN Addl. LIST: ★
✍🏻📋✍🏻📋✍🏻📋✍🏻📋✍🏻📋
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವಿದ್ಯಾರ್ಥಿ ನಿಲಯದ 117 (66+51HK) ಮೇಲ್ವಿಚಾರಕರು ( Hostel Warden) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
DELHI POLICE: LIST OF MALE CANDIDATES QUALIFIED FOR PE&MT AND DV
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻
★ QUESTION PAPER: ★
✍🏻🍁✍🏻🍁✍🏻🍁✍🏻🍁✍🏻
30-12-2023 ರಂದು KPSC ನಡೆಸಿದ HK ಭಾಗದ Co-operative Inspector ಹುದ್ದೆಗಳ ನೇಮಕಾತಿಯ GK ಪರೀಕ್ಷೆಯ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ REVISED KEY ANS.: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಲಿಖಿತ ಪರೀಕ್ಷೆಗಳ ಪರಿಷ್ಕೃತ ಸರಿ ಉತ್ತರ (Revised Key Ans) ಗಳನ್ನು KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📃✍🏻📃✍🏻📃✍🏻📃✍🏻📃✍🏻
★ SUCCESS SECRET: ★
💐🍁💐🍁💐🍁💐🍁💐
ಈ ಬಾರಿಯ ಯಶಸ್ಸು ನಿಮಗಲ್ಲದೆ ಇನ್ಯಾರಿಗೆ ಸಿಕ್ಕೀತು?
ಈ ಲೇಖನವನ್ನು ಮಿಸ್ ಮಾಡದೇ ಓದಿ.!!
ನಿಮ್ಮ ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿಯಾಗಬೇಕಾ? ಹಾಗಾದರೆ ತಾಳ್ಮೆಯಿಂದ ಇದನ್ನೊಮ್ಮೆ ಓದಿ.!!
ಬದುಕಿನಲ್ಲಿ ಯಶಸ್ವಿಯಾಗಬೇಕೆಂದುಕೊಂಡಿರುವವರು ಯಾರಿದ್ದೀರಿ?’ ಎಂದು ಯಾವುದೇ ವಿದ್ಯಾರ್ಥಿಗಳ, ಯುವಜನರ ಸಮೂಹವನ್ನು ಕೇಳಿನೋಡಿ. ಎಲ್ಲ ಕೈಗಳೂ ಮೇಲೇಳುತ್ತವೆ. ಬರೀ ಯುವಕರು ಮಾತ್ರವಲ್ಲ, ಎಲ್ಲರಿಗೂ ಜೀವನದಲ್ಲಿ ಮುಂದೆ ಬರುವ ಬಯಕೆ, ಏನನ್ನಾದರೂ ಸಾಧಿಸುವ ಕನಸು.
ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಕಾರಣ ದಿನನಿತ್ಯದ ಕೆಲಸಕ್ಕೂ, ಕನಸಿಗೂ, ಗುರಿಗೂ ವ್ಯತ್ಯಾಸವೇ ಬಹುತೇಕರಿಗೆ ಗೊತ್ತಿಲ್ಲ! ಉದಾಹರಣೆಗೆ, ಪ್ರತಿದಿನ ಹತ್ತಿರದ ಅಂಗಡಿಯಿಂದ ಹಾಲು ತರುವುದು ಒಂದು ಕೆಲಸ. ನೀವು ಐದು, ಹತ್ತು, ಹದಿನೈದು ವರ್ಷಗಳ ಕಾಲ ಹಾಲು ತಂದರೂ ಅದು ವಿಶೇಷವಲ್ಲ. ಹಾಗಂತ ಹಾಲು, ತರಕಾರಿ ತರುವುದು, ನೆಲ ಗುಡಿಸಿ ಒರೆಸುವುದು ಎಲ್ಲವೂ ಕೆಲಸವೇ. ಅವನ್ನು ಮಾಡಲೇಬೇಕು. ಹಾಗೆಯೇ ಸಾಧನೆಯ ಬಗ್ಗೆ ಯೋಚಿಸುತ್ತಲೇ ಇರುವುದು ಕನಸು. ಆದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಗುರಿಯೊಂದನ್ನು ಇಟ್ಟುಕೊಳ್ಳಬೇಕು. ಅದು ಪರೀಕ್ಷೆಯಲ್ಲಿ ಅಂಕ ಗಳಿಸುವುದಿರಬಹುದು, ಒಳ್ಳೆಯ ಕೆಲಸ ಪಡೆಯುವುದಿರಬಹುದು, ಉತ್ತಮ ಹಾಡುಗಾರರಾಗುವುದಿರಬಹುದು, ಚೆನ್ನಾಗಿ ಕೀಬೋರ್ಡ್ ನುಡಿಸುವುದನ್ನು ಕಲಿಯುವುದಾಗಿರಬಹುದು. ಇವೆಲ್ಲ ಒಂದೆರಡು ದಿನಗಳಲ್ಲಿ ಆಗುವಂಥದ್ದಲ್ಲ.
ನಾವು ಯಾವುದೇ ಗುರಿ ಹಾಕಿಕೊಂಡಿರಲಿ, ಅದಕ್ಕೊಂದು ಯೋಜನೆ ಇರಬೇಕು. ಶ್ರದ್ಧೆಯಿಂದ ದಿನವೂ ಸಾಧನೆಗೆ ಸಮಯ ನೀಡುವುದರಿಂದ ದೀರ್ಘಕಾಲದಲ್ಲಿ ಅಪೂರ್ವ ಸಾಧನೆ ಮಾಡಬಹುದು.
ನಮಗಿರುವ ತೊಂದರೆ ಎಂದರೆ, ನಾವು ದಿನನಿತ್ಯ ಮಾಡುವ ಕೆಲಸಗಳಲ್ಲಿ ಯಾವುದು ಪ್ರಮುಖ ಎಂದು ನಿರ್ಧರಿಸಿರುವುದಿಲ್ಲ. ನಾನು ಈಗ ಮಾಡುತ್ತಿರುವ ಕೆಲಸ ಎಷ್ಟು ಮುಖ್ಯ? ಇದಕ್ಕಿಂತ ಮುಖ್ಯ ಕೆಲಸ ಯಾವುದಾದರೂ ಇದೆಯೇ ಎಂಬುದನ್ನು ಗುರುತಿಸಬೇಕು. (ವಿಶೇಷ ಸೂಚನೆ: ಇಂತಹ ಉಚಿತ ಮಾರ್ಗದರ್ಶನಕ್ಕಾಗಿ, & Job news ಗಾಗಿ ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರ ಮಾರ್ಗದರ್ಶನದ ಎಸ್ ಆರ್ ವಲ್ಡ್೯ ಟೆಲಿಗ್ರಾಂ ಗ್ರೂಪ್ ಗೆ join ಆಗಿ, ಅದರಲ್ಲಿ ಈಗಾಗಲೇ 3,85,000ಕ್ಕೂ ಅಧಿಕ ಜನರು join ಆಗಿದ್ದಾರೆ, 9538781570ಗೆ ಲಿಂಕ್ ಕಳುಹಿಸುವಂತೆ ಕೋರಿ ಒಂದು ವಾಟ್ಸಾಪ್/ಟೆಲಿಗ್ರಂ ಮೆಸೇಜ್ ಮಾಡಿದರೆ ಲಿಂಕ್ ಕಳುಹಿಸುತ್ತಾರೆ join ಆಗಿ ತುಂಬಾ ಅತ್ಯದ್ಭುತ ಮಾಹಿತಿ ಹಾಕುತ್ತಾರೆ ಆ ಗ್ರೂಪ್ ನಲ್ಲಿ) ಉದಾಹರಣೆಗೆ, ಮುಂಬರುವ ಪರೀಕ್ಷೆಗೆ ಎಂಟು ದಿನದಲ್ಲಿ ಹದಿನಾರು ಪಾಠಗಳನ್ನು ಓದಬೇಕೆಂದು ಗುರಿ ಹಾಕಿಕೊಂಡಿದ್ದರೆ, ದಿನಕ್ಕೆ ಎರಡು ಪಾಠ ಓದಲೇಬೇಕು. ನಿಮ್ಮ ಮೊದಲ ಕೆಲಸ ಆ ಎರಡು ಪಾಠ ಓದಿ ಮುಗಿಸುವುದಾಗಬೇಕು. ಆ ನಂತರವೇ ಬೇರೆ ವಿಚಾರ.
ದಿನನಿತ್ಯವೂ ಮಾಡುವ ಚಿಕ್ಕಪುಟ್ಟ ಕೆಲಸಗಳು ಅದ್ಭುತವಾದ ಫಲಿತಾಂಶ ನೀಡಬಲ್ಲವು. ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ದಿನನಿತ್ಯ 5 ನಿಮಿಷ ದೀರ್ಘ ಉಸಿರಾಟ ಮಾಡಿದರೆ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ನಮ್ಮ ಇಂಗ್ಲಿಷ್ ಭಾಷೆಯ ಶಬ್ದಭಂಡಾರ ಉತ್ತಮಗೊಳ್ಳಬೇಕೆಂದರೆ ದಿನಕ್ಕೆ ಎರಡು ಹೊಸ ಶಬ್ದ ಕಲಿಯುವುದು, ಒಂದರ್ಧ ಪುಟ ಇಂಗ್ಲಿಷ್ ಓದುವುದು, ಇಂಗ್ಲಿಷ್ ತರಬೇತಿ ನೀಡುವುದಕ್ಕೇ ಇರುವ ಸಾವಿರಾರು ಯೂಟ್ಯೂಬ್ ವಿಡಿಯೋಗಳ ಪೈಕಿ ಒಂದನ್ನಾದರೂ 5 ನಿಮಿಷ ನೋಡುವುದು ಮಾಡಬೇಕು. 15 ನಿಮಿಷಗಳ ಕಾಲ ಒಂದು ವರ್ಷಕಾಲ ದಿನವೂ ಇದನ್ನು ಮಾಡಿದರೆ ಇಂಗ್ಲಿಷ್ ಭಾಷಾಸಾಮರ್ಥ್ಯ ಉತ್ತಮಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ! ಇದು ಯಾರಿಗೂ ಗೊತ್ತಿಲ್ಲದ ವಿಚಾರವೇನಲ್ಲ; ಆದರೆ 15 ನಿಮಿಷ ಅದನ್ನು ಮಾಡುವುದಕ್ಕೇ ನಮಗೆ ಬೋರ್ ಆಗಿಬಿಡುತ್ತದೆ! ಐದು ನಿಮಿಷ ಪ್ರಾಣಾಯಾಮ ಮಾಡಲೂ ಸಮಯವಿಲ್ಲ; ಅದೇ ಟಿವಿಯೆದುರು ಕೂತು ಅದೇ ಹಳಸಲು ಜೋಕುಗಳ, ಅಸಂಬದ್ಧ ಮಾತುಗಳ ಕಾರ್ಯಕ್ರಮಗಳನ್ನು 2-3 ಗಂಟೆ ನೋಡಿದರೆ ಏನೂ ಅನ್ನಿಸುವುದಿಲ್ಲ! ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥಮಾಡಲು ಬೇಸರವೆನಿಸುವುದಿಲ್ಲ! ಹಾಗಾಗಿ ಯಾವ ಕೆಲಸ ನಮಗೆ ಮುಖ್ಯ ಎಂದು ನಿರ್ಧರಿಸಿಕೊಂಡು ಅದಕ್ಕೆ ಮಹತ್ವ ಕೊಡುವುದು ಬಹುಮುಖ್ಯ. ಇಲ್ಲದಿದ್ದರೆ ಬೇರೆಬೇರೆ ಕೆಲಸಗಳಲ್ಲಿ ಸೋರಿಹೋಗುವ ಸಮಯವನ್ನು ಹೇಗೆ ಉಪಯೋಗಿಸುವುದು ಎಂದೇ ಗೊತ್ತಾಗುವುದಿಲ್ಲ. ಕಷ್ಟದ ಕೆಲಸಗಳಿಗಿಂತ ಸುಲಭವಾದ ಕೆಲಸಗಳೆಡೆ ಆಕರ್ಷಿತವಾಗುವುದು ಮನಸ್ಸಿನ ಸ್ವಭಾವ. ಅದಕ್ಕೆ ತಕ್ಕಂತೆ ತಾಳಹಾಕಿದರೆ ನಾವು ಮಾಡಬೇಕು ಅಂದುಕೊಂಡ ಕೆಲಸಗಳೆಲ್ಲ ಹಾಗೆಯೇ ಉಳಿದುಬಿಡುತ್ತವೆ.
ಬಹುಶಃ, ಯಶಸ್ವಿ ಮತ್ತು ಅಯಶಸ್ವಿ ವ್ಯಕ್ತಿಗಳ ನಡುವೆ ಇರುವ ವ್ಯತ್ಯಾಸವೆಂದರೆ ಅದೇ! ಸಾಧಕರು ಮುಖ್ಯ ವಿಷಯಗಳಿಗೆ ಮಹತ್ವ ಕೊಡುತ್ತಾರಷ್ಟೇ ಅಲ್ಲ, ದಿನದಿನದ ಕೆಲಸವನ್ನು ನಿಗದಿತ ಸಮಯ ಹೊಂದಿಸಿಕೊಳ್ಳುವುದರ ಮೂಲಕ ಅಂದಂದೇ ಮುಗಿಸಿಬಿಡುತ್ತಾರೆ.
ಜೀನಿಯಸ್ ಎನಿಸಿಕೊಂಡವರು, ಅದ್ಭುತ ‘ಐಕ್ಯೂ’ ಇರುವವರು ಮಾತ್ರವೇ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ಸುಳ್ಳುಮಾಡಿ ಅಪರೂಪದ ಸಾಧನೆಗೈದ ಸಾಧಾರಣ ವ್ಯಕ್ತಿಗಳೆಲ್ಲರೂ ಅನುಸರಿಸಿದ ಮಾರ್ಗ ಇದೇ!
ದೊಡ್ಡ ಗುರಿಯೊಂದನ್ನು ಇಟ್ಟುಕೊಳ್ಳುವುದು, ಮತ್ತು ದಿನವೂ ಅದನ್ನು ತಲುಪಲು, ಯಾವ ಅಡೆತಡೆ ಬಂದರೂ, ನಿರಂತರವಾಗಿ ಕೆಲಸ ಮಾಡುವುದು!
ನಮ್ಮ ಗುರಿಯೆಡೆಗೆ ಲಕ್ಷ್ಯ ಹರಿಸಿದಾಗ ಮುಖ್ಯವಲ್ಲದ ವಿಷಯಗಳ ಬಗ್ಗೆ ಗಮನ ಕೊಡಲು ಹೋಗಬಾರದು. ಯಾವುದಾದರೂ ಮುಲಾಜಿಗೆ ಸಿಕ್ಕು ನಾವು ನಮಗಿಷ್ಟವಿಲ್ಲದ ಕೆಲಸ ಮಾಡುತ್ತಿರುತ್ತೇವೆ. ಆದರೆ ನಮಗೆ ಯಾವುದು ಮುಖ್ಯವೋ ಅದನ್ನು ಮಾಡಿ ಮುಗಿಸಲು ಬೇಡದ ಅಷ್ಟು ಪ್ರಮುಖವಲ್ಲದ ವಿಚಾರಗಳನ್ನು ಕೈ ಬಿಡುವುದು ಅನಿವಾರ್ಯ. ಮುಖ್ಯಪರೀಕ್ಷೆ ಒಂದು ವಾರವಿರುವಾಗ ದೊಡ್ಡಪ್ಪನ ಮಗಳ ಮದುವೆ ಏನಾದರೂ ಬಂದರೆ ಹೋಗಬೇಕೆಂದಿಲ್ಲ. ಪರೀಕ್ಷೆ ಮುಗಿದ ಮೇಲೂ ಹೋಗಿ ಮಾತಾಡಿಸಿಕೊಂಡು ಬರಬಹುದು. ನಮಗೆ ನಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇದ್ದರೆ ಯಾರೂ ಏನೂ ಅಂದುಕೊಳ್ಳುವುದಿಲ್ಲ. ಇದೊಂದು ಉದಾಹರಣೆ ಮಾತ್ರ.!!
ಮುಂದುವರೆಯುತ್ತದೆ.....!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️
ಜನೆವರಿ-2023:
ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋
★ SBI Prelims Soon: ★
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 5447 Circle Based Officers (CBO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Online Preliminary Exam ನ್ನು ಕನ್ನಡದಲ್ಲಿಯೂ ಬರೆಯಬಹುದು.! ಈ Exam ನ್ನು ಅತೀ ಶೀಘ್ರದಲ್ಲಿಯೇ (2024 ಜನವರಿಯಲ್ಲಿ) ನಡೆಸಲಾಗುತ್ತದೆ.!!
⚫ Pre Examination Training Materials available for download for SC/ST/OBC/ESM/Religious minority communities Candidates who have opted for Training.!!
👇🏻👇🏻👇🏻👇🏻👇🏻👇🏻👇🏻👇🏻
https://bank.sbi/web/careers/crpd/2023/cbo-study-material
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KAR-TET CERTIFICATE: ★
⭐💫⭐💫⭐💫⭐💫⭐💫🌟
⚫ 03-09-2023 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (TET ) ಫಲಿತಾಂಶದಲ್ಲಿ ಅರ್ಹರಾದ (Qualified) ಅಭ್ಯರ್ಥಿಗಳು ಮಾತ್ರ ತಮ್ಮ ಅರ್ಹತಾ ಪ್ರಮಾಣಪತ್ರ (TET Certificate) ವನ್ನು Download ಮಾಡಿಕೊಳ್ಳಲು ಇದೀಗ ಅವಕಾಶ ಕಲ್ಲಿಸಲಾಗಿದೆ.!!
⚫ Application No. & Date of Birth ಹಾಕಿ Certificate Download ಮಾಡಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://sts.karnataka.gov.in/TET/ResultLogin.aspx
🌟⚜️🌟⚜️🌟⚜️🌟⚜️🌟⚜️🌟
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL: JE Final List: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ JE (Civil) ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
★ ಅರೇ.!! ಹೌದಾ.??: ★
✍🏻📃✍🏻📃✍🏻📃✍🏻📃
★ ಕೇವಲ 15 CTI ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಬರೋಬ್ಬರಿ 25,000.!!
★ ಅಂದರೆ ಒಂದು ಹುದ್ದೆಗೆ ಸುಮಾರು 1600ಕ್ಕೂ ಅಧಿಕ ಅಭ್ಯರ್ಥಿಗಳ ಹೋರಾಟ.!!
★ 2024 ಜನವರಿ 6 & 7 ರಂದು ನಡೆಯಲಿದೆ CTI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ SEO EXAM MARKS: ★
✍🏻📃✍🏻📃✍🏻📃✍🏻📃✍🏻
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) ಹುದ್ದೆಗಳ (NON HK) ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻
★ K-SET: Dress Code: ★
✍🏻📃✍🏻📃✍🏻📃✍🏻📃✍🏻
2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯಲ್ಲಿ ಡ್ರೆಸ್ ಕೋಡ್ ಹೇಗಿರಬೇಕು ಎಂಬುದರ ಬಗ್ಗೆ KEA ಪ್ರಕಟಣೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI (HK) Hall Ticket: ★
✍🏻📃✍🏻📃✍🏻📃✍🏻📃✍🏻📃
2024 ಜನವರಿ 6 & 7 ರಂದು ನಡೆಯಲಿರುವ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ HK ವೃಂದದ 15 Commercial Tax Inspector (CTI) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ & ಕನ್ನಡ ಭಾಷಾ ಪರೀಕ್ಷೆಗಳ ಪ್ರವೇಶ ಪತ್ರವನ್ನು KPSC ಇದೀಗ ಪ್ರಕಟಿಸಿದೆ, ಪಡೆಯಲು ಲಿಂಕ್.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ನ್ಯೂ Year: ನೀವು Hear: ★
✍🏻📋✍🏻📋✍🏻📋✍🏻📋✍🏻📋
ಹೊಸ ವರ್ಷವೇ.?
ಅದು ನಾವು ಹೊಸಬರಾದಾಗ ಮಾತ್ರ.!!
ಇದು ಕೇವಲ
'ನಮ್ಮ ಮನೆಯಲ್ಲಿರುವ'
ಅಸಲಿ ಕ್ಯಾಲೆಂಡರ್ ಬದಲಿಸುವ ಸಮಯವಲ್ಲ.!
ಅಸಲಿಯಾಗಿ 'ನಮ್ಮ ಮನದಲ್ಲಿರುವ'
ದೌರ್ಬಲ್ಯಗಳನ್ನು ಬದಲಿಸುವ ಸಮಯ.!!
ಇಂದು ನಮ್ಮ ಪಂಚಾಂಗ ಬದಲಾಗಿದೆ.!
ಆದರೆ ನಮ್ಮ ಪಂಚ-ಅಂಗಗಳು.?
ನಿನ್ನೆಯವರೆಗೂ ನಮ್ಮೊಳಗೇ ಇದ್ದ ದುಷ್ಟನನ್ನು ಕೊಂದು, ಪಿಂಡ ಇಟ್ಟು
ಶ್ರಾದ್ಧ ಮಾಡೋಣ.!!
ನಮ್ಮೊಳಗೇ ಇರುವ ಒಳ್ಳೆಯ ವ್ಯಕ್ತಿಯಿಂದ ಈ ನಾಡು ನುಡಿಯ ಸೇವೆ ಮಾಡಿಸೋಣ.!!
ಮೊದಲು ನಾವು ಬದಲಾಗೋಣ, ಬದಲಾಗುತ್ತಲೇ ಬದಲಾಯಿಸೋಣ.!
ನಾವು ಇನ್ನೂ ಬದಲಾಗದಿದ್ದರೆ,
ಇಂತಹ ಅದೆಷ್ಟೋ ಹೊಸ ವರ್ಷಗಳನ್ನು ಕಳೆದಿದ್ದೇವೆ ಅಲ್ಲವೇ? ಇದು ಕೂಡಾ ಆ ಪಟ್ಟಿಗೆ ಸೇರತ್ತೆ ಅಷ್ಟೇ.
Don't stop until ur
"VICTORY" becomes an "HISTORY."
ಇಸವಿ ಬದಲಾಗಲಿ ಆದರೆ
ಈ ಸವಿ ಬದಲಾಗದೇ ಇರಲಿ.!!
"ಹೊಸ ವರುಷ ತರಲಿ
ವರುಷ ಪೂರ್ತಿ ಹರುಷ."
-ಶ್ರೀ ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
★ KSFC: Exam Date: ★
✍🏻📃✍🏻📃✍🏻📃✍🏻📃✍🏻
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 40ಕ್ಕೂ ಅಧಿಕ Deputy Manager ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ 17-02-2024ರಂದು KEAಯು ಲಿಖಿತ ಪರೀಕ್ಷೆ ನಡೆಸಲಿದೆ.!!
ಸೂಚನೆ: PDF ನಲ್ಲಿ 2024 ಎಂಬುದರ ಬದಲಾಗಿ 2023 ಎಂದು ತಪ್ಪಾಗಿ ನಮೂದಾಗಿದೆ.! ಇದನ್ನು KEA ಶೀಘ್ರದಲ್ಲಿಯೇ ತಿದ್ದುಪಡಿ ಮಾಡಲಿ.!!
✍🏻📋✍🏻📋✍🏻📋✍🏻📋✍🏻📋
DELHI POLICE: LIST OF FEMALE CANDIDATES QUALIFIED FOR PE&MT AND DV
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Delhi Police Result: ★
✍🏻📋✍🏻📋✍🏻📋✍🏻📋✍🏻📋
⚫ ಸಿಬ್ಬಂದಿ ನೇಮಕಾತಿ ಆಯೋಗ (SSC) ವು Delhi Police ಹುದ್ದೆಗಳ ನೇಮಕಾತಿಗಾಗಿ 2023 ಡಿಸೆಂಬರ್ ನಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
⚫ For Question Paper Click here:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29218
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL: IMP. NOTICE: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ AE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಮಿಕ್ಕುಳಿದ ವೃಂದದ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದು ಆಯ್ಕೆಗೆ ಅರ್ಹರಿದ್ದು, ಸದರಿ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ ಸ್ಥಳೀಯ ವೃಂದದಲ್ಲಿ ಆಯ್ಕೆಯಾಗಲು ಇಚ್ಚಿಸಿದ್ದಲ್ಲಿ 03-01-2024 ರಂದು ಇಚ್ಚಿತಾ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻